NITK. ಈ ಹೆಸರು ಕರ್ನಾಟಕದದವರಿಗೆ KREC ಎಂದೇ ಪರಿಚಯ. ರಾಷ್ಟ್ರ ಮಟ್ಟದ ಉತ್ತಮ ತಂತ್ರಙ್ನಾನ ಕಾಲೇಜೊಂದು ನಮ್ಮ ರಾಜ್ಯದಲ್ಲಿರುವುದು ನಾವು ಹೆಮ್ಮೆ ಪಡಬೇಕಾದ ವಿಚಾರ. CETಯನ್ನೂ ಮೀರಿದ AIEEE ಎಂಬ ಪರೀಕ್ಷೆಯನ್ನು ಬರೆದು ನಮ್ಮ NITKಯಂತಹ ಸಂಸ್ಥೆಗಳನ್ನು ಪ್ರವೇಶಿಸಬಹುದು. ಬಹುಷಹ ಎಲ್ಲಾ ರೀತಿಗಳಲ್ಲಿ NITK ಕರ್ನಾಟಕದ ಯಾವುದೇ ಕಾಲೇಜಿಗಿಂತಹ ಉತ್ತಮ. ಆದರೆ ನಮ್ಮಲ್ಲಿ ಹಲವರಿಗೆ ಇದರ ಇರುವಿಕೆಯ ಬಗ್ಗೆಯೇ ತಿಳಿದಿಲ್ಲ! ಯಾವುದೋ ಹಳ್ಳಿಯವನಾಗಿದ್ದರೆ ಸರಿ ಎನ್ನಬಹುದು. ಆದರೆ ಬೆಂಗಳೂರು, ಮೈಸೂರಿನಂತಹ ದೊಡ್ಡ ನಗರಗಳಲ್ಲೂ ಸಾಕಷ್ಟು ಜನರಿಗೆ NITKಯ ಪರಿಚಯ ಇಲ್ಲವೇ ಇಲ್ಲ. ಹಲವು ಬಾರಿ ಈ ಮದುವೆ-ಮುಂಜಿಗಳಲ್ಲಿ ಎಂದೂ ಭೇಟಿಯಾಗದ ಅತಿ ದೂರದ ಸಂಬಂಧಿಕರು ಅಥವಾ ಹಳೆಯ ಸ್ಕೂಲ್ ಮೇಷ್ಟ್ರುಗಳು ಅಥವಾ ಪಕ್ಕದ ಬೀದಿಯವರು ಭೇಟಿಯಾದಾಗ ನನ್ನನ್ನು "ಏನಯ್ಯಾ? ನೀನು ಇವನ ಮಗ ತಾನೆ? ಎಷ್ಟು ದೊಡ್ಡದಾಗಿ ಬೆಳ್ದಿದ್ದೀಯ!" ಎಂದು ಕೇಳುತ್ತಾರೆ. ಆ ಪ್ರಶ್ನೆಗೆ ಅತಿ ಸೂಕ್ತ ಉತ್ತರ ನನಗೆ ಇಂದಿಗೂ ತಿಳಿದಿಲ್ಲ!. ಹಾಗೆಯೇ ಅವರು "ಏನ್ ಓದುತ್ತಿದ್ದೀಯಪ್ಪ?" ಎಂದು ಕೇಳಿದಾಗ ನಾನು ಹೆಮ್ಮೆಯಿಂದ "NITK ಸುರತ್ಕಲ್" ಎಂದು ಉತ್ತರಿಸಿದರೆ ಅವರು "ಏನು??? CETಯಲ್ಲಿ ಒಳ್ಳೆಯ ಅಂಕಿ ಬಂದಿತ್ತಲ್ಲಪ್ಪ... ಹೋಗಿ ಹೋಗಿ ಅಂಥ ಕಾಲೇಜಾ ಸೇರೋದು? RV ಅಥವಾ PES ಸೇರೋದು ತಾನೆ!" ಎನ್ನುತ್ತಾರೆ! ಇಂಥವರಿಗೆ ಏನು ಹೇಳಬೇಕೋ ನನಗಂತೂ ಗೊತ್ತಿಲ್ಲ! ಇನ್ನೂ ಕೆಲವರು "NIIT ನಾ???" ಎಓದು ಕೇಳುತ್ತಾರೆ. ಕೋಪದಿಂದ "ನಾನು NIIT ಅಲ್ಲ! NITKಯಲ್ಲಿ ಇರೋದು ಅಂಕಲ್!!!" ಎಂದು ಹೇಳಿ ಹೇಳಿ ಸಾಕಾಗಿದೆ! IITಗಳ ಬಗ್ಗೆ ಅರಿತಿರುವ ಹಲವರಿಗೆ ಅದ್ಯಾಕೋ NITಗಳ ಬಗ್ಗೆ ಎನೂ ಗೊತ್ತಿರುವುದಿಲ್ಲ. ನಮ್ಮ ಕಾಲೇಜಿಗೆ ಇದೆಂಥ ಅನ್ಯಾಯ?? ಒಂದು ಕಡೆ ಅದು IITಯೂ ಇಲ್ಲ, ಮತ್ತೊಂದೆಡೆ ಇಲ್ಲಿ ಬೆಂಗಳೂರಿನ ಆರಾಮವೂ ಇಲ್ಲ. ಒಳ್ಳೆ ತ್ರಿಶಂಕು ಸ್ಥಿಥಿಯಲ್ಲಿ ಸಿಕ್ಕಿಬಿದ್ದಂತಿದೆ ಈ ನಮ್ಮ NITK...
Comments